ಈಚಿನ ಕೆಲವರ್ಷಗಳಿಂದ ಆಧುನಿಕ ಅಡುಗೆಮನೆಯ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಳ್ಳುತ್ತಿರುವುದು ಮೈಕ್ರೋವೇವ್ ಓವನ್. ಫ್ರಿಜ್ಜಿನಲ್ಲಿರುವುದನ್ನು ಬಿಸಿಮಾಡಿ ಬಳಸುವವರಿಂದ ಪ್ರಾರಂಭಿಸಿ ಹೊಸರುಚಿಗಳನ್ನು ಪ್ರಯತ್ನಿಸುತ್ತಲೇ ಇರುವ ಪಾಕಶಾಸ್ತ್ರಪರಿಣತರವರೆಗೆ ಈ ಪರಿಕರ ಎಲ್ಲರಿಗೂ ಅಚ್ಚುಮೆಚ್ಚು.
ಮೈಕ್ರೋವೇವ್ ಓವನ್ನಿನ ಜನಪ್ರಿಯತೆಗೆ ಕಾರಣಗಳು ಹಲವು. ಅದರ ಬಳಕೆಯ ಸರಳತೆ ಬಹುಶಃ ಈ ಕಾರಣಗಳಲ್ಲಿ ಮೊದಲನೆಯದು: ಬಟ್ಟಲಿನಲ್ಲಿಟ್ಟ ಆಹಾರ ಕ್ಷಣಾರ್ಧದಲ್ಲಿ ಬಿಸಿಯಾಗುವುದು ಎಂದರೇನು ಸುಮ್ಮನೆಯೆ?
ನಿಜ, ಮೈಕ್ರೋವೇವ್ ಬಳಸಿ ಆಹಾರ ಬಿಸಿಮಾಡಲು ಅಥವಾ ಹೊಸದಾಗಿ ಆಹಾರ ತಯಾರಿಸಲು ಅತ್ಯಂತ ಕಡಿಮೆ ಸಮಯ ಸಾಕು. ಅಷ್ಟೇ ಅಲ್ಲ, ಇತರ ವಿಧಾನಗಳಷ್ಟು ಕಷ್ಟಪಡಬೇಕಾಗಿಯೂ ಇಲ್ಲ. ಕಾಫಿ ಬಿಸಿಮಾಡುವುದರಿಂದ ಕೇಕ್ ತಯಾರಿಸುವವರೆಗೆ ಎಲ್ಲವೂ ಸರಳ, ಸರಾಗ.
ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಈ ಪರಿಕರದಲ್ಲಿ, ಅದರ ಹೆಸರೇ ಹೇಳುವಂತೆ, ಮೈಕ್ರೋವೇವ್, ಅಂದರೆ ಸೂಕ್ಷ್ಮತರಂಗಗಳು ಬಳಕೆಯಾಗುತ್ತವೆ. ವಿದ್ಯುತ್ಕಾಂತ ರೋಹಿತದಲ್ಲಿ (ಇಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಮ್) ರೇಡಿಯೋ ಅಲೆಗಳು ಹಾಗೂ ಅವಕೆಂಪು (ಇನ್‌ಫ್ರಾರೆಡ್) ತರಂಗಗಳ ನಡುವಿನ ಸ್ಥಾನ ಮೈಕ್ರೋವೇವ್‌ನದ್ದು.
ಆಹಾರದಲ್ಲಿರುವ ನೀರು, ಸಕ್ಕರೆ ಹಾಗೂ ಕೊಬ್ಬಿನ ಅಣುಗಳು ಈ ತರಂಗಗಳ ಸಂಪರ್ಕಕ್ಕೆ ಬಂದಾಗ ಬಿಸಿಯಾಗುತ್ತವೆ. ಆದರೆ ಬಹುತೇಕ ಪ್ಲಾಸ್ಟಿಕ್, ಗಾಜು ಹಾಗೂ ಸೆರಾಮಿಕ್ ವಸ್ತುಗಳ ಮೇಲೆ ಈ ತರಂಗಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ, ಪ್ಲಾಸ್ಟಿಕ್ಕಿನ ಬಟ್ಟಲಿನಲ್ಲಿಟ್ಟ ಆಹಾರ ಬಿಸಿಯಾದರೂ ಬಟ್ಟಲು ಹಾಗೆಯೇ ಇರುತ್ತದೆ! ಲೋಹಗಳು ಈ ತರಂಗಗಳನ್ನು ಪ್ರತಿಫಲಿಸುವುದರಿಂದ ಸಾಮಾನ್ಯವಾಗಿ ಮೈಕ್ರೋವೇವ್ ಓವನ್‌ಗಳಲ್ಲಿ ಲೋಹದ ಪಾತ್ರೆಗಳನ್ನು ಬಳಸುವಂತಿಲ್ಲ.
ಇಷ್ಟೆಲ್ಲ ಅನುಕೂಲಕರವಾದ ಪರಿಕರವನ್ನು ನಮ್ಮ ಮನೆಗೂ ಕೊಳ್ಳೋಣ ಎಂದು ಹೊರಟರೆ ಮಾರುಕಟ್ಟೆಯಲ್ಲಿ ನಮಗೆ ಹಲವು ಬಗೆಯ ಮೈಕ್ರೋವೇವ್ ಓವನ್‌ಗಳು ಕಾಣಸಿಗುತ್ತವೆ.
ಈ ಪೈಕಿ ಮೊದಲನೆಯ ವಿಧ ಸಾಮಾನ್ಯ (ಸೋಲೋ) ಮೈಕ್ರೋವೇವ್ ಓವನ್ನುಗಳದು. ಪ್ರಮುಖವಾಗಿ ಆಹಾರ ಬಿಸಿಮಾಡಲು ಬಳಕೆಯಾಗುವ ಈ ಬಗೆಯ ಓವನ್ನುಗಳಲ್ಲಿ ಸಾಮಾನ್ಯ ಅಡುಗೆ ಕೂಡ ಸಾಧ್ಯ. ಕಾಫಿ ಬಿಸಿಮಾಡುವುದರಿಂದ ಅನ್ನ-ಸಾರು ತಯಾರಿಯವರೆಗೆ ಸೋಲೋ ಓವನ್ನುಗಳು ಎಲ್ಲವನ್ನೂ ಸುಲಭವಾಗಿಸುತ್ತವೆ.
ಆದರೆ ಬಾಡಿಸುವ (ಟೋಸ್ಟ್), ಹುರಿಯುವ (ರೋಸ್ಟ್) ಕೆಲಸಗಳೆಲ್ಲ ಸೋಲೋ ಓವನ್ನಿನಿಂದ ಅಸಾಧ್ಯ. ಇದನ್ನೆಲ್ಲ ಮಾಡಬೇಕಾದ ಅಡುಗೆಗಳಿಗೆಂದೇ ಗ್ರಿಲ್ ಮೈಕ್ರೋವೇವ್ ಓವನ್ನುಗಳು ದೊರಕುತ್ತವೆ. ಸೋಲೋ ಮೈಕ್ರೋವೇವ್‌ನಲ್ಲಿರುವ ಸೌಲಭ್ಯಗಳ ಜೊತೆಗೆ ಹೀಟಿಂಗ್ ಕಾಯಿಲ್‌ಗಳನ್ನೂ ಹೊಂದಿರುವುದು ಈ ಬಗೆಯ ಓವನ್ನುಗಳ ವೈಶಿಷ್ಟ್ಯ. ಪ್ಲಾಸ್ಟಿಕ್, ಗಾಜು ಇತ್ಯಾದಿಗಳ ಜೊತೆಗೆ ಲೋಹದ ಪಾತ್ರೆಗಳನ್ನೂ ಈ ಓವನ್ನುಗಳಲ್ಲಿ ಬಳಸಬಹುದು.
ಸೋಲೋ ಹಾಗೂ ಗ್ರಿಲ್ ಎರಡೂ ಬಗೆಯ ತಂತ್ರಜ್ಞಾನಗಳ ಹೊಂದಾಣಿಕೆಯಿಂದ ರೂಪುಗೊಂಡಿರುವುದು ಕನ್ವೆಕ್ಷನ್ ಓವನ್ನುಗಳು. ಸದ್ಯ ಮಾರುಕಟ್ಟೆಯಲ್ಲಿರುವ ಓವನ್ನುಗಳ ಪೈಕಿ ಬಹುತೇಕ ಎಲ್ಲ ರೀತಿಯ ಅಡುಗೆಗಳಲ್ಲೂ ಬಳಸಬಹುದಾದ ಸಾಮರ್ಥ್ಯವಿರುವುದು ಈ ಬಗೆಯ ಓವನ್ನುಗಳಿಗೆ ಮಾತ್ರವೇ. ಆಹಾರ ಬಿಸಿಮಾಡುವುದರಿಂದ ಪ್ರಾರಂಭಿಸಿ ಕೇಕನ್ನೋ ಪಿಜ್ಜಾವನ್ನೋ ಬಿಸ್ಕತ್ತನ್ನೋ ಬೇಕ್ ಮಾಡುವವರೆಗೆ ಕನ್ವೆಕ್ಷನ್ ಓವನ್ನುಗಳು ಸಕಲವನ್ನೂ ನಿಭಾಯಿಸಬಲ್ಲವು. ಇನ್ನಿತರ ಬಗೆಯ ಓವನ್ನುಗಳಿಗೆ ಹೋಲಿಸಿದರೆ ಈ ಬಗೆಯ ಓವನ್ನಿನ ಬೆಲೆ, ಸಹಜವಾಗಿಯೇ, ಜಾಸ್ತಿಯಿರುತ್ತದೆ.
ಈ ಮೂರರಲ್ಲಿ ಯಾವುದೇ ಬಗೆಯ ಮೈಕ್ರೋವೇವ್ ಕೊಳ್ಳುವುದಾದರೂ ಅದರ ಸಾಮರ್ಥ್ಯ ನಮ್ಮ ಅಗತ್ಯಕ್ಕೆ ಸರಿಯಾಗಿ ಹೊಂದುವಂತಿರಬೇಕು. ಉದಾಹರಣೆಗೆ ಒಬ್ಬರೋ ಇಬ್ಬರೋ ಇರುವ ಮನೆಯಾದರೆ ಇಪ್ಪತ್ತು ಲೀಟರಿಗಿಂತ ಕಡಿಮೆ ಸಾಮರ್ಥ್ಯದ ಓವನ್ ಸಾಕಾಗಬಹುದು. ಆದರೆ ಹೆಚ್ಚಿನ ಜನರಿರುವಾಗ ಮೈಕ್ರೋವೇವ್ ಓವನ್ ಸಾಮರ್ಥ್ಯವೂ ಅದಕ್ಕೆ ತಕ್ಕಂತೆ ಹೆಚ್ಚಿರಬೇಕಾಗುತ್ತದೆ. ಇಪ್ಪತ್ತರಿಂದ ಮೂವತ್ತು ಲೀಟರ್ ಸಾಮರ್ಥ್ಯದ ಓವನ್ನುಗಳು ನಾಲ್ಕರಿಂದ ಆರು ಜನರ ಕುಟುಂಬಗಳಿಗೆ ಸಾಕಾಗುತ್ತದೆ ಎನ್ನುವುದು ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಅಭಿಪ್ರಾಯ.
ಇಷ್ಟೇ ಅಲ್ಲ, ಮೈಕ್ರೋವೇವ್‌ನಲ್ಲಿರುವ ಇನ್ನಿತರ ಸೌಲಭ್ಯಗಳ ಕುರಿತೂ ನಾವು ಗಮನಹರಿಸಬೇಕಾಗುತ್ತದೆ. ವಿಭಿನ್ನ ಬಗೆಯ ಆಹಾರ ತಯಾರಿಸಲು ಪೂರ್ವನಿರ್ಧಾರಿತ ಹೊಂದಾಣಿಕೆಗಳು, ಪಾತ್ರೆಯನ್ನು ಸತತವಾಗಿ ತಿರುಗಿಸುತ್ತಾ ಸಮಾನ ಪ್ರಮಾಣದಲ್ಲಿ ಬಿಸಿಮಾಡುವ 'ಟರ್ನ್‌ಟೇಬಲ್' - ಇಂತಹ ಅನೇಕ ಸೌಲಭ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ನಮಗೆ ಅಗತ್ಯವೆನಿಸುವ ಸೌಲಭ್ಯಗಳಿರುವ ಓವನ್ನನ್ನೇ ಆರಿಸಿಕೊಳ್ಳುವುದು ಒಳಿತು.
ಮೈಕ್ರೋವೇವ್ ಓವನ್ ಕೊಳ್ಳಲು ಹೊರಟಾಗ ಓವನ್ ಟೋಸ್ಟರ್ ಗ್ರಿಲ್ಲರ್ (ಓಟಿಜಿ) ಎನ್ನುವ ಇನ್ನೊಂದು ಸಾಧನವೂ ಮಾರುಕಟ್ಟೆಯಲ್ಲಿರುವುದು ನಮ್ಮ ಗಮನಕ್ಕೆ ಬರುತ್ತದೆ. ಓಟಿಜಿಗೂ ಮೈಕ್ರೋವೇವ್ ಓವನ್ನಿಗೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ನಮ್ಮ ಖರೀದಿ ನಿರ್ಧಾರದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಬಲ್ಲದು.
ಮೈಕ್ರೋವೇವ್ ಓವನ್ನುಗಳಂತೆ ಸೂಕ್ಷ್ಮತರಂಗಗಳನ್ನು (ಮೈಕ್ರೋವೇವ್) ಬಳಸುವ ಬದಲಿಗೆ ಓಟಿಜಿಗಳು ನೇರವಾಗಿ ವಿದ್ಯುಚ್ಛಕ್ತಿಯನ್ನೇ ಶಾಖವಾಗಿ ಪರಿವರ್ತಿಸುತ್ತವೆ. ಹಾಗೆ ಹೆಚ್ಚಿನ ಶಾಖದ ಉತ್ಪಾದನೆ ಸಾಧ್ಯವಾಗುವುದರಿಂದ ಓಟಿಜಿಗಳು ಬೇಕಿಂಗ್‌ಗೆ ಹೆಚ್ಚು ಸೂಕ್ತವಾಗುತ್ತವೆ. ಆದರೆ ಸಾಮಾನ್ಯ ಮೈಕ್ರೋವೇವ್‌ನಲ್ಲಿ ಸಾಧ್ಯವಾಗುವ ಇತರ ಕೆಲಸಗಳು (ಉದಾ: ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಬಿಸಿಮಾಡುವುದು) ಇಲ್ಲಿ ಅಸಾಧ್ಯ. ಅಲ್ಲದೆ ಕನ್ವೆಕ್ಷನ್ ಮೈಕ್ರೋವೇವ್ ಓವನ್ನುಗಳ ಹೋಲಿಕೆಯಲ್ಲಿ ಓಟಿಜಿ ಬಿಸಿಯಾಗಲು ಬೇಕಾದ ಸಮಯ, ಹಾಗೂ ವಿದ್ಯುಚ್ಛಕ್ತಿ ಬಳಕೆಯೂ ಹೆಚ್ಚು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!
Baccarat | Free Online Card Games - Wolverione
ReplyDeleteHow to Play Baccarat Online 바카라사이트 - หาเงินออนไลน์ Card Game. When you have 바카라 사이트 a gambling account, you are responsible for gambling and that is why you must always use one of the