ಮನೆಯಲ್ಲಿ ಎಷ್ಟೇ ಒಳ್ಳೆಯ ಡಿಜಿಟಲ್ ಕ್ಯಾಮೆರಾ ಇದ್ದರೂ ಅದನ್ನು ಸದಾಕಾಲ ನಮ್ಮೊಡನೆ ಇಟ್ಟುಕೊಂಡಿರಲು ಆಗುವುದಿಲ್ಲವಲ್ಲ! ಹಾಗಾಗಿಯೇ ಮೊಬೈಲ್ ಫೋನಿನ ಕ್ಯಾಮೆರಾಗಳು ನಮ್ಮ ಅಚ್ಚುಮೆಚ್ಚಿನ ಸಂಗಾತಿಗಳಾಗಿ ಬೆಳೆದಿವೆ. ತರಕಾರಿ ತರಲು ಹೋದಗಲಾಗಲಿ ಪಾರ್ಕಿನಲ್ಲಿ ವಾಕಿಂಗ್ ಮಾಡುವಾಗಲಾಗಲಿ ಫೋಟೋ ತೆಗೆಯಬೇಕು ಅನ್ನಿಸಿದರೆ ನಾವೆಲ್ಲ ಬಳಸುವುದು ಮೊಬೈಲಿನಲ್ಲಿರುವ ಕ್ಯಾಮೆರಾವನ್ನೇ.
ಹಾಗಾಗಿ ಮೊಬೈಲ್ ಫೋನ್ ಕೊಳ್ಳಲು ಹೊರಟಾಗ ಅದರಲ್ಲಿರುವ ಕ್ಯಾಮೆರಾ ಹೇಗಿರಬೇಕು ಎನ್ನುವತ್ತಲೂ ನಾವು ಗಮನ ಕೊಡಬೇಕಾಗುತ್ತದೆ.
ಮೊಬೈಲ್ ಕ್ಯಾಮೆರಾ ಗುಣಮಟ್ಟವನ್ನು ನಿರ್ಧರಿಸುವಲ್ಲಿ ಬೇರೆಲ್ಲ ಡಿಜಿಟಲ್ ಕ್ಯಾಮೆರಾಗಳಿಗೆ ಅನ್ವಯವಾಗುವ ಮಾನದಂಡಗಳನ್ನೇ ಬಳಸಬಹುದು.
ಮೊದಲನೆಯದಾಗಿ, ಇತರ ಕ್ಯಾಮೆರಾಗಳಂತೆ ಇಲ್ಲೂ ಮೆಗಾಪಿಕ್ಸೆಲ್‌ಗೆ ಅನಗತ್ಯ ಮಹತ್ವ ಕೊಡುವುದು ಬೇಡ. ನಮಗೆಷ್ಟು ದೊಡ್ಡ ಗಾತ್ರದ ಚಿತ್ರಗಳು ಬೇಕಾಗಬಹುದೋ ಅಷ್ಟು ಮೆಗಾಪಿಕ್ಸೆಲ್ ಸಾಮರ್ಥ್ಯ ಇದ್ದರೆ ಸಾಕು. ೪೦-೫೦ ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಮೊಬೈಲುಗಳು ಸಿಗುತ್ತವೆ ಎಂದಮಾತ್ರಕ್ಕೆ ಅವನ್ನೇ ಕೊಳ್ಳಬೇಕು ಎನ್ನುವುದು ಬಹುಶಃ ಸರಿಯಾದ ನಿರ್ಧಾರ ಆಗಲಾರದು.
ನಿಜ, ಕ್ಯಾಮೆರಾದಲ್ಲಿ ಎಷ್ಟು ಚೆಂದದ ಚಿತ್ರಗಳು ಮೂಡುತ್ತವೆ ಎನ್ನುವುದು ಬರಿಯ ಮೆಗಾಪಿಕ್ಸೆಲ್‌ಗಳನ್ನಷ್ಟೇ ಅವಲಂಬಿಸಿರುವುದಿಲ್ಲ. ಕ್ಯಾಮೆರಾದ ಸೆನ್ಸರ್ - ಲೆನ್ಸ್ ಇತ್ಯಾದಿಗಳೆಲ್ಲ ಎಷ್ಟು ಚೆನ್ನಾಗಿವೆ, ಕಡಿಮೆ ಬೆಳಕಿನಲ್ಲಿ ಎಷ್ಟು ಸಮರ್ಥವಾಗಿ ಕೆಲಸಮಾಡುತ್ತವೆ, ಫೋಕಸ್ ಆಗಲು ಎಷ್ಟು ಸಮಯ ಬೇಕು - ಈ ಅಂಶಗಳೆಲ್ಲ ಮೆಗಾಪಿಕ್ಸೆಲ್‌ನಷ್ಟು, ಅಥವಾ ಅದಕ್ಕಿಂತ ತುಸು ಹೆಚ್ಚೇ ಮುಖ್ಯವಾಗುತ್ತವೆ. ಫ್ಲ್ಯಾಶ್ ಸೌಲಭ್ಯ ಇದ್ದರೆ ಅದೂ ಒಳ್ಳೆಯದು. ಒಳ್ಳೆಯ ಗುಣಮಟ್ಟದ (ಸಾಧ್ಯವಾದರೆ ಎಚ್‌ಡಿ) ವೀಡಿಯೋಗಳನ್ನು ಸೆರೆಹಿಡಿಯಬೇಕಾದ್ದೂ ಅಗತ್ಯವೇ.
ಹೀಗೆ ಕ್ಲಿಕ್ಕಿಸಿದ ಚಿತ್ರಗಳನ್ನು, ಸೆರೆಹಿಡಿದ ವೀಡಿಯೋಗಳನ್ನು ನೋಡಬೇಕಲ್ಲ, ನಮ್ಮ ಫೋನಿನ ಪರದೆಯ ಗುಣಮಟ್ಟ ಚೆನ್ನಾಗಿದ್ದರೆ ಆ ಅನುಭವವೇ ಬೇರೆ! ಪರದೆಯಲ್ಲಿ ಎಷ್ಟು ಚೆಂದದ ಚಿತ್ರಗಳು ಮೂಡುತ್ತವೆ ಎಂದು ತಿಳಿದುಕೊಳ್ಳಲು ನಾವು ಪರದೆಯ ರೆಸಲ್ಯೂಶನ್ ಎಷ್ಟಿದೆ ಎಂದು ಗಮನಿಸಬಹುದು. ಟೀವಿ ಪರದೆಯಲ್ಲಿದ್ದಂತೆಯೇ ಇಲ್ಲೂ ಹೆಚ್ಚಿನ ರೆಸಲ್ಯೂಶನ್ ಇದ್ದರೆ ಚಿತ್ರ ಚೆನ್ನಾಗಿ ಮೂಡಿಬರುತ್ತದೆ ಎನ್ನಬಹುದು.
ಮೊಬೈಲ್ ಫೋನ್ ಪರದೆಯ ಗುಣಮಟ್ಟವನ್ನು ಸೂಚಿಸುವ ಇನ್ನೊಂದು ಮಾಪನ 'ಪಿಪಿಐ' - ಪರದೆಯ ಮೇಲೆ ಒಂದು ಚದರ ಇಂಚು ವಿಸ್ತೀರ್ಣದಲ್ಲಿ ಎಷ್ಟು ಪಿಕ್ಸೆಲ್‌ಗಳು ಮೂಡುತ್ತವೆ ಎನ್ನುವುದನ್ನು ಇದು ಸೂಚಿಸುತ್ತದೆ (ಪಿಕ್ಸೆಲ್ಸ್ ಪರ್ ಇಂಚ್). ಈ ಸಂಖ್ಯೆ ಹೆಚ್ಚಿದ್ದಷ್ಟೂ ಪರದೆಯಲ್ಲಿ ಹೆಚ್ಚು ಉತ್ತಮ ಚಿತ್ರಗಳು ಮೂಡಿಬರುವುದು ಸಾಧ್ಯ. ಆಪಲ್ ಸಂಸ್ಥೆ 'ರೆಟಿನಾ ಡಿಸ್ಪ್ಲೇ' ಎಂದು ಪ್ರಚಾರ ಕೊಡುತ್ತಿರುವುದು ಹೀಗೆ ಹೆಚ್ಚು ಪಿಪಿಐ ಇರುವ ಪರದೆಗಳಿಗೇ.
ಹೆಚ್ಚಿನ ರೆಸಲ್ಯೂಶನ್ ಏನೋ ಸರಿ, ಬೇರೆಬೇರೆ ಬೆಳಕಿನ ಪರಿಸ್ಥಿತಿಯಲ್ಲಿ ಫೋನ್ ಪರದೆಯಲ್ಲಿ ಚಿತ್ರಗಳು ಹೇಗೆ ಮೂಡಿಬರುತ್ತವೆ ಎನ್ನುವುದು ಕೂಡ ಗಮನಿಸಬೇಕಾದ ಇನ್ನೊಂದು ಅಂಶ. ಪರದೆಯಲ್ಲಿ ಬಳಕೆಯಾಗಿರುವ ತಂತ್ರಜ್ಞಾನ - ಎಲ್‌ಸಿಡಿ, ಎಎಂಓಎಲ್‌ಇಡಿ ಇತ್ಯಾದಿ - ಕೂಡ ಮುಖ್ಯವೇ. ಆದರೆ ಇದರಲ್ಲಿ ನಮಗೆ ಯಾವುದು ಇಷ್ಟವಾಗುತ್ತದೆ ಎನ್ನುವುದು ವೈಯಕ್ತಿಕ ಆಯ್ಕೆಗೆ ಬಿಟ್ಟ ವಿಷಯವಾದ್ದರಿಂದ ಮೊಬೈಲ್ ಪರದೆಯ ಗುಣಮಟ್ಟವನ್ನೊಮ್ಮೆ ನೋಡಿ ನಮಗಿಷ್ಟವಾದುದನ್ನು ಆರಿಸಿಕೊಳ್ಳುವುದು ಒಳ್ಳೆಯದು.
ಜೇಬಿನಲ್ಲೋ ಬ್ಯಾಗಿನಲ್ಲೋ ಇಟ್ಟಾಗ ಮೊಬೈಲ್ ಪರದೆಯ ಮೇಲೆ ಗೀಚುಗಳಾಗುವುದು ಸಾಮಾನ್ಯ. ಇದನ್ನು ತಪ್ಪಿಸಲು ನಾವು ಸ್ಕ್ರೀನ್‌ಗಾರ್ಡ್‌ಗಳ ಮೊರೆಹೋಗುತ್ತೇವೆ ತಾನೆ? ಸ್ಕ್ರೀನ್‌ಗಾರ್ಡ್ ಇಲ್ಲದಿದ್ದರೂ ಗೀಚು ಬೀಳದ ಪರದೆ (ಕಾರ್ನಿಂಗ್ ಸಂಸ್ಥೆಯ ಗೊರಿಲ್ಲಾ ಗ್ಲಾಸ್, ಆಪಲ್ ಸಂಸ್ಥೆ ಬಳಸಲು ಹೊರಟಿರುವ ಸಫೈರ್ ಇತ್ಯಾದಿ) ಕೆಲ ಫೋನುಗಳಲ್ಲಿರುತ್ತದೆ. ನಮ್ಮ ಬಜೆಟ್ಟಿಗೆ ಹೊಂದುವಂತಿದ್ದರೆ ಈ ವೈಶಿಷ್ಟ್ಯವಿರುವ ಫೋನುಗಳಿಗೆ ಕೊಂಚ ಹೆಚ್ಚಿನ ಮಾರ್ಕು ಕೊಡುವುದರಲ್ಲಿ ತಪ್ಪಿಲ್ಲ.
ಮೊಬೈಲ್ ಫೋನ್ ಕುರಿತು ಎಷ್ಟು ಹೇಳಿದರೂ ಹೇಳಿದ್ದು ಮುಗಿಯುವುದೇ ಇಲ್ಲ. ಸ್ಮಾರ್ಟ್ ಫೋನುಗಳಿಗೂ ಸ್ಮಾರ್ಟ್ ಅಲ್ಲದ ಫೋನುಗಳಿಗೂ ಏನು ವ್ಯತ್ಯಾಸ, ಮೊಬೈಲಿನಲ್ಲಿ ಎರಡು ಸಿಮ್ ಏಕೆ ಬೇಕು ಮುಂತಾದ ಪ್ರಶ್ನೆಗಳು ಇನ್ನೂ ಹಾಗೆಯೇ ಉಳಿದಿವೆಯಲ್ಲ, ಆ ಕುರಿತು ಮುಂದಿನವಾರ ಗಮನಹರಿಸೋಣ.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!
0 ಪ್ರತಿಕ್ರಿಯೆಗಳು:
Post a Comment