ಲ್ಯಾಪ್‌ಟಾಪ್ ಕೊಳ್ಳಲು ಹೊರಟಾಗ ನಮಗೆ ಯಾವ ಬಗೆಯ ಲ್ಯಾಪ್‌ಟಾಪ್ ಬೇಕು ಎಂದು ತೀರ್ಮಾನಿಸಿದರೆ ಅರ್ಧ ಕೆಲಸ ಆದಂತೆ. ಇನ್ನು ಲ್ಯಾಪ್‌ಟಾಪ್‌ನಲ್ಲಿ ಏನೆಲ್ಲ ಸೌಲಭ್ಯಗಳಿರಬೇಕು ಎಂದು ನಿರ್ಧರಿಸುವುದು, ಮೊದಲ ಭಾಗದಷ್ಟೇ ಮುಖ್ಯವಾದ, ಉಳಿದರ್ಧಭಾಗದ ಕೆಲಸ.
ನಮ್ಮ ಆಯ್ಕೆಯ ಲ್ಯಾಪ್‌ಟಾಪ್‌ನಲ್ಲಿ ಯಾವೆಲ್ಲ ಬಗೆಯ ಸಂಪರ್ಕಗಳು ಲಭ್ಯವಿವೆ ಎನ್ನುವುದು ಮುಖ್ಯವಾಗಿ ಪರಿಗಣಿಸಬೇಕಾದ ಅಂಶಗಳಲ್ಲೊಂದು. ವೈ-ಫೈ ಹಾಗೂ ಯುಎಸ್‌ಬಿ ಡಾಂಗಲ್ ಎರಡರ ಮೂಲಕವೂ ಅಂತರಜಾಲ ಸಂಪರ್ಕ ಪಡೆದುಕೊಳ್ಳುವಂತಿರಬೇಕಾದ್ದು ಹೆಚ್ಚೂಕಡಿಮೆ ಅನಿವಾರ್ಯವೇ ಎನ್ನಬಹುದು.
ಲ್ಯಾಪ್‌ಟಾಪ್‌ಗಳಲ್ಲಿ ಇಥರ್‌ನೆಟ್ ಕೇಬಲ್ ಮೂಲಕ ಅಂತರಜಾಲ ಸಂಪರ್ಕದ ಬಳಕೆ ಕಡಿಮೆಯಾಗುತ್ತಿದೆಯಾದರೂ ಅನಿರೀಕ್ಷಿತ ಸಂದರ್ಭಗಳಲ್ಲಿ ಬಳಸಲು ಆ ಸೌಲಭ್ಯವೂ ಇರುವುದು ಒಳಿತು. ನೀವು ಬ್ಲೂಟೂತ್ ತಂತ್ರಜ್ಞಾನ ಬಳಸುವ ಸಾಧನಗಳನ್ನು ಉಪಯೋಗಿಸುವವರಾದರೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಸೌಲಭ್ಯ ಕೂಡ ಇರಬೇಕಾಗುತ್ತದೆ.
ಇಂದಿನ ದಿನಗಳಲ್ಲಿ ಹತ್ತಾರು ಸೌಲಭ್ಯಗಳಿಗಾಗಿ ಯುಎಸ್‌ಬಿ ಸಂಪರ್ಕವನ್ನೇ ಅವಲಂಬಿಸಬೇಕಾದ್ದು ಅನಿವಾರ್ಯವಾಗಿಬಿಟ್ಟಿದೆಯಲ್ಲ, ಹಾಗಾಗಿ ಲ್ಯಾಪ್‌ಟಾಪ್‌ನಲ್ಲಿ ಯುಎಸ್‌ಬಿ ಪೋರ್ಟ್‌ಗಳು ಸಾಕಷ್ಟು ಸಂಖ್ಯೆಯಲ್ಲಿರಬೇಕು.
ಯುಎಸ್‌ಬಿ ೨.೦ಗಿಂತ ಹೆಚ್ಚು ವೇಗದ ಸಂಪರ್ಕ ಒದಗಿಸುವ ಯುಎಸ್‌ಬಿ ೩.೦ ಪೋರ್ಟ್‌ಗಳಿದ್ದರೆ ಅದೂ ಒಳ್ಳೆಯದೇ (ಯುಎಸ್‌ಬಿ ೩.೦ ಪೋರ್ಟ್ ಆದರೆ ಅದರೊಳಗೆ ಕಾಣಿಸುವ ಪ್ಲಾಸ್ಟಿಕ್ ಭಾಗ ನೀಲಿ ಬಣ್ಣದಲ್ಲಿರುತ್ತದೆ; ಯುಎಸ್‌ಬಿ ೨.೦ ಪೋರ್ಟ್‌ನಲ್ಲಿ ಅದು ಬಿಳಿ ಅಥವಾ ಕಪ್ಪು ಬಣ್ಣದ್ದಾಗಿರುವುದು ಸಾಮಾನ್ಯ).
ಸಾಮಾನ್ಯ ಮಾನಿಟರುಗಳಿಗೆ, ಪ್ರೊಜೆಕ್ಟರುಗಳಿಗೆ ಕಂಪ್ಯೂಟರನ್ನು ಸಂಪರ್ಕಿಸಲು ವಿಜಿಎ ಪೋರ್ಟ್ ಬಳಸುವುದು ಸಂಪ್ರದಾಯ. ನಿಮ್ಮ ಲ್ಯಾಪ್‌ಟಾಪ್ ಅನ್ನು ಆ ಬಗೆಯ ಯಾವುದೇ ಸಾಧನಕ್ಕೆ ಸಂಪರ್ಕಿಸುವ ಅಗತ್ಯವಿದ್ದರೂ ವಿಜಿಎ ಪೋರ್ಟ್ ಇರುವ ಲ್ಯಾಪ್‌ಟಾಪ್ ಅನ್ನೇ ಆರಿಸಿಕೊಳ್ಳಿ. ಹೊಸಮಾದರಿಯ ಮಾನಿಟರ್, ಟೀವಿ ಅಥವಾ ಪ್ರೊಜೆಕ್ಟರುಗಳಿಗೆ ಎಚ್‌ಡಿಎಂಐ ಪೋರ್ಟ್ ಮೂಲಕವೂ ನಿಮ್ಮ ಲ್ಯಾಪ್‌ಟಾಪ್ ಅನ್ನು ಸಂಪರ್ಕಿಸಬಹುದು.
ಇನ್ನು ಕ್ಯಾಮೆರಾ-ಮೊಬೈಲ್ ಫೋನ್ ಇತ್ಯಾದಿಗಳಲ್ಲೆಲ್ಲ ಬಳಸುವ ಮೆಮೊರಿ ಕಾರ್ಡ್‌ನಿಂದ ಮಾಹಿತಿ ವರ್ಗಾಯಿಸಲು ಬಿಲ್ಟ್-ಇನ್ ಕಾರ್ಡ್ ರೀಡರ್ ಇದ್ದರೆ ಬಾಹ್ಯ ಕಾರ್ಡ್‌ರೀಡರುಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇರುವುದಿಲ್ಲ. ವೀಡಿಯೋ ಚಾಟಿಂಗ್‌ಗಾಗಿ ಬಳಸಲು ಒಳ್ಳೆಯ ವೆಬ್ ಕ್ಯಾಮೆರಾ, ಧ್ವನಿಗ್ರಹಣಕ್ಕಾಗಿ ಮೈಕ್ ಹಾಗೂ ಸ್ಪಷ್ಟ ಧ್ವನಿ ಕೇಳಿಸುವ ಸ್ಪೀಕರ್ ಇರುವುದು ಕೂಡ ಅಪೇಕ್ಷಣೀಯ.
ರ್‍ಯಾಂಡಮ್ ಆಕ್ಸೆಸ್ ಮೆಮೊರಿ (ರ್‍ಯಾಮ್) ಹಾಗೂ ಹಾರ್ಡ್ ಡಿಸ್ಕ್ ಸಾಮರ್ಥ್ಯ ನಿಮ್ಮ ಅಗತ್ಯಕ್ಕೆ ತಕ್ಕಂತಿರಬೇಕು. ಲ್ಯಾಪ್‌ಟಾಪ್‌ನಲ್ಲಿ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ) ಇರಬೇಕೋ ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ) ಇರಬೇಕೋ ಎನ್ನುವುದನ್ನು - ಕೆಲ ಸಂದರ್ಭಗಳಲ್ಲಿ - ನಾವು ಆಯ್ದುಕೊಳ್ಳಬಹುದು. ಕಾರ್ಯಕ್ಷಮತೆಯ ದೃಷ್ಟಿಯಿಂದ ಎಸ್‌ಎಸ್‌ಡಿ ಗುಣಮಟ್ಟ ಉತ್ತಮವಾಗಿರುತ್ತದೆ; ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದರ ಬೆಲೆ ತೀರಾ ಜಾಸ್ತಿ, ಹಾಗೂ ಅವುಗಳ ಶೇಖರಣಾ ಸಾಮರ್ಥ್ಯ ಎಚ್‌ಡಿಡಿಗಳಿಗಿಂತ ಕಡಿಮೆ.
ಹಿಂದೊಮ್ಮೆ ಕಂಪ್ಯೂಟರುಗಳಿಂದ ಫ್ಲಾಪಿ ಡ್ರೈವ್‌ಗಳು ಕಾಣದಂತೆ ಮಾಯವಾದವಲ್ಲ, ಲ್ಯಾಪ್‌ಟಾಪ್‌ಗಳ ಮಟ್ಟಿಗೆ ಈಗ ಆಪ್ಟಿಕಲ್ ಡ್ರೈವ್‌ಗಳೂ ಅದೇ ಹಾದಿಯಲ್ಲಿ ಸಾಗುತ್ತಿವೆ. ಹೊಸ ಮಾದರಿಯ ಅನೇಕ ಲ್ಯಾಪ್‌ಟಾಪ್‌ಗಳಲ್ಲಿ, ನೆಟ್‌ಬುಕ್‌ಗಳಲ್ಲಿ ಸಿ.ಡಿ/ಡಿವಿಡಿ ಡ್ರೈವ್‌ಗಳು ಇರುವುದಿಲ್ಲ. ಹಾಗಾಗಿ ಲ್ಯಾಪ್‌ಟಾಪ್ ಕೊಳ್ಳುವ ಮೊದಲೇ ನಮಗೆ ಸಿ.ಡಿ/ಡಿವಿಡಿ ಡ್ರೈವ್ ಬೇಕೋ ಬೇಡವೋ ಎಂದು ತೀರ್ಮಾನಿಸಿಕೊಳ್ಳುವುದು ಒಳ್ಳೆಯದು. ಸಿ.ಡಿ/ಡಿವಿಡಿ ಡ್ರೈವ್ ಅಗತ್ಯವಿರುವವರು ಆ ಸೌಲಭ್ಯ ಇಲ್ಲದ ಲ್ಯಾಪ್‌ಟಾಪ್ ಕೊಂಡರೆ ಎಕ್ಸ್‌ಟರ್ನಲ್ ಸಿ.ಡಿ/ಡಿವಿಡಿ ಡ್ರೈವ್ ಕೊಳ್ಳಲು ಮತ್ತೆ ಹಣ ಖರ್ಚುಮಾಡಬೇಕಾಗುತ್ತದೆ. ಅಂದಹಾಗೆ ಸಿ.ಡಿ/ಡಿವಿಡಿ ಡ್ರೈವ್ ಇರುವ ಲ್ಯಾಪ್‌ಟಾಪ್ ಕೊಳ್ಳುವವರು ಸಾಧ್ಯವಾದರೆ ಅದಕ್ಕಿಂತ ಒಂದು ಹಂತ ಮೇಲಿನ ಬ್ಲೂ ರೇ ಡ್ರೈವ್ ಅನ್ನೇ ಕೊಳ್ಳಬಹುದು. ಈಗ ಬಳಕೆಗೆ ಬರುತ್ತಿರುವ ಬ್ಲೂ ರೇ ಡಿಸ್ಕ್‌ಗಳನ್ನು ಇಂತಹ ಡ್ರೈವ್‌ನಲ್ಲಿ ಬಳಸುವುದು ಸಾಧ್ಯ,
ಕೊನೆಯದಾಗಿ ಲ್ಯಾಪ್‌ಟಾಪ್ ಬೇಕೋ ಟ್ಯಾಬ್ಲೆಟ್ ಬೇಕೋ ಎಂದು ಕೂಡ ಮುಂಚಿತವಾಗಿಯೇ ತೀರ್ಮಾನಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಚಟುವಟಿಕೆಗಳ ಪಟ್ಟಿ ಬ್ರೌಸಿಂಗ್, ಸಿನಿಮಾ ವೀಕ್ಷಣೆ, ಗೇಮ್ಸ್ - ಹೀಗೆ ಸಾಗುವುದಾದರೆ ತೂಕದ ಲ್ಯಾಪ್‌ಟಾಪ್‌ಗಿಂತ ಹಗುರವಾದ ಟ್ಯಾಬ್ಲೆಟ್ ನಿಮಗೆ ಉತ್ತಮ ಸಂಗಾತಿಯಾಗಬಲ್ಲದು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!
0 ಪ್ರತಿಕ್ರಿಯೆಗಳು:
Post a Comment